Showing posts with label ಕನ್ನಡ. Show all posts
Showing posts with label ಕನ್ನಡ. Show all posts

Monday, September 21, 2009

ನಿನ್ನ ಕಣ್ಣ ವಿಸ್ತಾರಕ್ಕೆ



ಅಂದು ಮಾರುದ್ದ ಕನಸ ನೇಯ್ದು
ಕಾಮನ ಬಿಲ್ಲು ಹಚ್ಚಿ,
ಎದೆಯ ತಂತಿಗಳ ಮೀಟಿ
ತುಟಿಗೆ ತುಟಿ ಹಚ್ಚಿ,
ಮನಸ ಬಿಚ್ಚಿ
ಕಿವಿಯಲ್ಲಿ ಪಿಸು ನುಡಿದು
ಮೈಯ ತುಂಬೆಲ್ಲ ರಂಗೋಲಿ ಚಿತ್ತಾರ ಬರೆದು
ಆಕಾಶಕ್ಕೆ ಮೈ ಚಾಚಿ
ನಕ್ಷತ್ರಕ್ಕೆ ಕೈ ಚಾಚಿ-
ಬಿಕ್ಕಿ, ನೇವರಿಸಿ, ಸಾವರಿಸಿ, ಎದೆಗೀರಿ
ಪ್ರೀತಿಯ ಲೆಕ್ಕಗಳ್
ಕಳೆದು, ಭಾಗಿಸಿ, ಕೂಡಿಸಿ-ಗುಣಿಸಿ
ತಬ್ಬಿಬ್ಬಾಗಿಸಿ
ಚಿಮ್ಮಿ ಗಿರಿಗಿಟ್ಟೆಯಾಡಿಸಿ
ಸುತ್ತಿ ಸುಳಿಯಾಗಿ,
ಅಲೆದು ಅಲೆಯಾಗಿ
ನಿಂತು ನೀ ನಕ್ಕಾಗ-
ಗೊತ್ತು ಗೆಳತಿ,
ನನ್ನ ಪ್ರೀತಿ ಆಪೋಶನ-
ಮನ ತಪೋವನ
(ಅದುವೇ ಕನ್ನಡದಲ್ಲಿ ಪ್ರಕಟವಾದದ್ದು - 2003)